ರೋಗಿಗಳ ಅಭಿಪ್ರಾಯಗಳು
 

ಗ್ಯಾಸ್ಟ್ರಿಕ್ ಬ್ಯಾಂಡಿಂಗ್
 

ಸ್ಲೀವ್ ಗ್ಯಾಸ್ಟ್ರೆಕ್ಟಮಿ
 


ಗ್ಯಾಸ್ಟ್ರಿಕ್ ಬೈಬಾಸ್


ಮೆಟಾಬೊಲಿಕ್ ಸರ್ಜರಿ -
ಮಧುಮೇಹ ಗುಣಪಡಿಸಬಹುದು

 

ಈ ವಿಡಿಯೋವನ್ನು ವೀಕ್ಷಿಸಿ, ಬಾರಿಯಾಟ್ರಿಕ್ ಹಾಗೂ ಮಧುಮೇಹ ಶಸ್ತ್ರಚಿಕಿತ್ಸೆ
ಬಗ್ಗೆ ಹೆಚ್ಚು ತಿಳಿದುಕೊಳ್ಳಿ
 

ರೋಗದ ಲಕ್ಷಣಗಳು ಮತ್ತು ಚಿಹ್ನೆಗಳು
 

ಫ್ಯಾಟ್ ಟು ಫಿಟ್
 

ವೈದ್ಯರನ್ನು ಭೇಟಿ ಮಾಡಿ
 

 

 

ಬೊಜ್ಜಿನ ಸಮಸ್ಯೆಗೆ ತಪಾಸಣೆ ಯಾವಾಗ ಅಗತ್ಯ ಅಂದರೆ:

 • ಸೊಂಟದ ಗಾತ್ರ ೪೦ ಇಂಚು ಮತ್ತು ಅದಕ್ಕಿಂತ ಹೆಚ್ಚಾಗಿದ್ದಲ್ಲಿ
 • ರೋಗಗ್ರಸ್ತ ಬೊಜ್ಜು ( BMI 37,5 ಅಥವಾ BMI 32.5  ಇದ್ದು, ಮಧುಮೇಹ, ಅಧಿಕ ರಕ್ತದೊತ್ತಡ, ಸಂಧಿವಾತ ಇತ್ಯಾದಿ ಸಂಬಂಧಿತ ಅಸ್ವಸ್ತತೆಗಳಿಂದ ಕೂಡಿದ್ದಲ್ಲಿ..,)
 • ತೂಕ ಇಳಿಸುವುದಕ್ಕಾಗಿ ಇತರೆ ವಿಧಾನಗಳಲ್ಲಿ ಪ್ರಯತ್ನಿಸಿ ವಿಫಲರಾಗಿದ್ದರೆ
 • ತೂಕ ಇಳಿಸುವುದಕ್ಕಾಗಿ ಜೀವನದ ಉದ್ದಕ್ಕೂ  ಜೀವನ ಶೈಲಿಯಲ್ಲಿ ಬದಲಾವಣೆ ತರಲು ಪ್ರೇರೇಪಿತರಾಗಿದ್ದೀರ ಅಥವಾ ಬದ್ಧರಾಗಿದ್ದೀರಾ?
 • ಪ್ರಮುಖ ಮಾನಸಿಕ ತೊಂದರೆ ಏನೂ ಇಲ್ಲದೆ ಇದ್ದಲ್ಲಿ
 • ಪ್ರಮುಖ ಮಾನಸಿಕ ತೊಂದರೆ ಏನೂ ಇಲ್ಲದೆ ಇದ್ದಲ್ಲಿ
ಮೇಲೆ ಹೇಳಿರುವ ಪರಿಸ್ಥಿತಿ  ತಮ್ಮದಾಗಿದ್ದಲ್ಲಿ ತಕ್ಷಣವೇ ತಮ್ಮ ವಿಶ್ವಾಸಾರ್ಹ "ಬೇರಿಯಾಟ್ರಿಕ್" ತಜ್ಞರನ್ನು ಭೇಟಿ ಮಾಡಿ.
+91-99000 14824ಬೇರಿಯಾಟ್ರಿಕ್ ಸರ್ಜರಿ ಎಂದರೇನು?

ಬೇರಿಯಾಟ್ರಿಕ್ ಸರ್ಜರಿ (ವ್ಯುತ್ಪತ್ತಿ: ಬರೋಸ್ ಮತ್ತು ಇಯಾಟ್ರಿಕೋಸ್  ಎಂಬ ಎರಡು ಗ್ರೀಕ್ ಪದಗಳಿಂದ  ಬೇರಿಯಾಟ್ರಿಕ್ ಶಬ್ದ ಹುಟ್ಟಿಕೊಂಡಿದೆ. ಬರೋಸ್ ಅಂದರೆ ತೂಕ, ಇಯಾಟ್ರಿಕೋಸ್ ಅಂದರೆ ಔಷಧ ಎಂದು ಅರ್ಥ) ಅಂದರೆ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಅಲ್ಲ . ಇದು ದೀರ್ಘ ಕಾಲದ ವೈದ್ಯಕೀಯ ಸಮಸ್ಯೆಗಳಾದ ಮಧುಮೇಹ, ರಕ್ತದೊತ್ತಡ, ಸಂಧಿವಾತ ರೋಗಗಳಿಗೆ ಪರಿಹಾರ ಒದಗಿಸುತ್ತದೆ. ಅಲ್ಲದೆ, ತೂಕದ ಸಮಸ್ಯೆಗೂ ಪರಿಹಾರ ನೀಡುತ್ತದೆ.

ಲಿಪೋಸಕ್ಶನ್ ಗಿಂತ ಇದು ಹೇಗೆ ಭಿನ್ನವಾಗಿದೆ?

ಲಿಪೋಸಕ್ಶನ್ ಒಂದು ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಆಗಿದ್ದು, ಕೆಲವು ಕಿಲೋಗಳಷ್ಟು ಕೊಬ್ಬನ್ನು ಹೀರಿ ತೆಗೆಯುವ ಮೂಲಕ ಶರೀರಕ್ಕೆ ಒಂದು ಸುಂದರ ರೂಪ ಕೊಡಲಾಗುತ್ತದೆ. ಇದು ತೂಕ ಇಳಿಕೆ ಮಾಡುವುದಕ್ಕಾಗಿ ನಡೆಸುವ ಶಸ್ತ್ರ ಚಿಕಿತ್ಸೆ ಅಲ್ಲ.


ಬಿಎಂಐ  ಅಂದರೇನು?

ಬಿಎಂಐ ಲೆಕ್ಕಾಚಾರ ತೂಕ (ಕಿಲೋಗ್ರಾಂ ಗಳಲ್ಲಿ)/ ಚೌಕ ಎತ್ತರ (ಮೀಟರ್ ಗಳಲ್ಲಿ).

ಬಿಎಂಐ  ಪ್ರಕಾರ

    ಬೊಜ್ಜಿನ ವಿಭಾಗ      ಬಿಎಂಐ
    ಅತಿ ತೂಕ      25-29.9
    ಬೊಜ್ಜು ಕ್ಲಾಸ್  i     30-34.9
    ಬೊಜ್ಜು ಕ್ಲಾಸ್  ii     35-39.9
    ಬೊಜ್ಜು ಕ್ಲಾಸ್  iii     40 ಕ್ಕಿಂತ ಅಧಿಕ 


ತೂಕ ಇಳಿಸೋದಕ್ಕೆ ನಾನು ಏನು ಮಾಡಬೇಕು?

ಲಭ್ಯ ಇರುವ ಆಯ್ಕೆಗಳು - ಡಯೆಟ್, ವ್ಯಾಯಾಮ, ಔಷಧ ಮತ್ತು ಸರ್ಜರಿ.

ಸರ್ವೇ ಸಾಮಾನ್ಯವಾದ ೩ ತೂಕ ಇಳಿಕೆ ವಿಧಾನಗಳು ಯಾವುವು ?

1. ರೂಕ್ಸ್-ಎನ್-ವೈ ಗ್ಯಾಸ್ಟ್ರಿಕ್ ಬೈಪಾಸ್ ವಿಧಾನ

 • ಹೊಟ್ಟೆಯನ್ನು ಸ್ಟ್ಯಾಪಲ್ ಮಾಡಿ, ಅದರ  ಗಾತ್ರ  ಕುಗ್ಗಿಸುವ ಮೂಲಕ ಆಹಾರ ಸೇವನೆ ಪ್ರಮಾಣಕ್ಕೆ ನಿರ್ಬಂಧ ಹೇರುವುದು
 • ಸಣ್ಣ ಕರುಳಿನ ಒಂದು ಭಾಗವನ್ನು ಬೈಪಾಸ್ ಮಾಡುವ ಮೂಲಕ, ಆಹಾರ ಜೀರ್ಣ ಕ್ರಿಯೆ ವಿಳಂಬವಾಗುವಂತೆ ಮಾಡುವುದು, ಆ ಮೂಲಕ ಆಹಾರದ ಸಂಪೂರ್ಣ ಕ್ಯಾಲೋರಿ ಹೀರದಂತೆ ತಡೆಯುವುದು 

2. ಸ್ಲೀವ್ ಗ್ಯಾಸ್ಟ್ರೆಕ್ಟಮಿ

 • ಹೊಟ್ಟೆಯನ್ನು ಉದ್ದ ನಾಳದ ಆಕಾರದಲ್ಲಿ ಇರುವಂತೆ ಮಾಡಿ ಸ್ಟ್ಯಾಪಲ್ ಮಾಡುವುದು
 • ಸ್ಟ್ಯಾಪಲ್ ಮಾಡಿ, ಉಳಿದ ಹೊಟ್ಟೆಯ ಹೆಚ್ಚುವರಿ ಭಾಗವನ್ನು ತೆಗೆದು ಹಾಕಲಾಗುತ್ತದೆ.
3. ಲ್ಯಾಪ್ರೋಸ್ಕೋಪಿಕ್  ಅಡ್ಜೆಸ್ಟೇಬಲ್ ಗ್ಯಾಸ್ಟ್ರಿಕ್ ಬ್ಯಾಂಡಿಂಗ್

 • ಹೊಟ್ಟೆಯ ತುತ್ತ ತುದಿಯ ಭಾಗವನ್ನು ಒಂದು ಸಣ್ಣ ಮತ್ತು ಒಂದು ದೊಡ್ಡ ಭಾಗವಾಗಿ ವಿಭಜಿಸುವುದಕ್ಕಾಗಿ ಬ್ಯಾಂಡ್ ಸುತ್ತುವುದು
 • ಬ್ಯಾಂಡ್ ಫ್ಲೆಕ್ಸಿಬಲ್ ಆಗಿದ್ದು ಭಾಗದ ಅಳತೆಯನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಸಹಾಯಕ ವಾಗುವಂತೆ ಇರುತ್ತದೆ

ಬೇರಿಯಾಟ್ರಿಕ್ ಸರ್ಜರಿಯ ಪ್ರಯೋಜನಗಳೇನು?

ಗಣನೀಯ ಮತ್ತು ನಿರಂತರ ಸಮತೋಲನದ ತೂಕ ಇಳಿಕೆ ಹೊರತಾಗಿ ಅನೇಕ ಪ್ರಯೋಜನಗಳಿವೆ. ಅವುಗಳೆಂದರೆ :

 • ಸರ್ಜರಿ ಬಳಿಕ,  ಮಧುಮೇಹ ಟೈಪ್ ೨  ಇರುವ ಬಹುತೇಕ ರೋಗಿಗಳಲ್ಲಿ ಸಕ್ಕರೆ ಪ್ರಮಾಣ ಸಂಪೂರ್ಣವಾಗಿ ಸಾಮಾನ್ಯ ಸ್ಥಿತಿಯಲ್ಲಿದೆ
 • ರಕ್ತದೊತ್ತಡ ಮತ್ತು ಕೊಬ್ಬಿನ ಅಂಶ ಕಡಿಮೆಯಾಗಿದೆ
 • ಆಸ್ತಮಾ, ಎದೆ ಉರಿ ಮತ್ತು ನಿದ್ದೆಯಲ್ಲಿ ಉಸಿರುಕಟ್ಟುವಿಕೆಯಿಂದ ಮುಕ್ತಿ
 • ಸಂಧಿವಾತದ ನೋವು ಕಡಿಮೆಯಾಗುತ್ತದೆ
 • ಸ್ವಾಭಿಮಾನ ಮತ್ತು ಮನಸಿನ ಭಾವನೆಗಳ ಅಭಿವ್ಯಕ್ತಿಯಲ್ಲಿ ಕೂಡಾ ಸಾಕಷ್ಟು ಸುಧಾರಣೆ ಕಾಣಿಸುತ್ತದೆ

ತೂಕ ಇಳಿಕೆ ಸರ್ಜರಿ ಎಷ್ಟು ಪರಿಣಾಮಕಾರಿ?

ಯಾವ ವಿಧದ ಸರ್ಜರಿ ಎಂಬುದಕ್ಕೆ ಅನುಗುಣವಾಗಿ, ನಿಮ್ಮ ಶರೀರದ ತೂಕ ಶೇ. 50 ರಿಂದ 90  ರ ತನಕ ತೂಕ ಇಳಿಕೆ ಕಂಡು ಬರಬಹುದು.  ಇತರೆ ಯಾವುದೇ ರೀತಿಯ ತೂಕ ಇಳಿಕೆಗಿಂತ ಈ ವಿಧಾನದ ಮೂಲಕ ತೂಕ ಇಳಿಕೆಯನ್ನು ನಿರ್ವಹಣೆ ಮಾಡಬಹುದು. 


ಈ ಸರ್ಜರಿ ಎಷ್ಟು ಸುರಕ್ಷಿತ?

ಉತ್ತಮ ಮೂಲ ಸೌಕರ್ಯ ಮತ್ತು ಸುಧಾರಿತ ಉಪಕರಣ  ಹೊಂದಿರುವ  ಟೆರ್ಷರಿ ಕೇರ್ ಆಸ್ಪತ್ರೆಗಳಲ್ಲಿ ಮತ್ತು  ತಜ್ಞ ವೈದ್ಯರ ಕೈಯಲ್ಲಿ ಈ ಸರ್ಜರಿ ನಡೆಯಲ್ಪಟ್ಟರೆ ಅದು ಸುರಕ್ಷಿತ. 10000  ಕ್ಕೂ ಅಧಿಕ ರೋಗಿಗಳ ಜೊತೆ ನಡೆಸಿದ ಸಮೀಕ್ಷೆ ಒಂದರ ಪ್ರಕಾರ, ತೂಕ ಇಳಿಕೆ ಸರ್ಜರಿಯ ವೇಳೆ ಸಾವಿನ ಪ್ರಮಾಣ ಕೇವಲ 0.3 % ಮಾತ್ರ ಎಂಬುದು ವೇದ್ಯವಾಗಿದೆ.


ಸರ್ಜರಿ ಆದ ಬಳಿಕ ಯಾವಾಗ ನಾನು ಮಗುವನ್ನು ಹೆರಬಹುದು?


ತಜ್ಞರ ಸಲಹೆ ಪ್ರಕಾರ, ಸರ್ಜರಿ ಮಾಡಿಸಿದ ಕನಿಷ್ಠ ೧೮ ತಿಂಗಳ ತನಕ ಹೆಣ್ಣು ಮಕ್ಕಳು, ಗರ್ಭದ ಒತ್ತಡ ತಪ್ಪಿಸುವ ಸಲುವಾಗಿ  ಗರ್ಭ ಧರಿಸಬಾರದು. ಸರ್ಜರಿ ಬಳಿಕ, ತ್ವರಿತ ತೂಕ ಇಳಿಕೆ ಮತ್ತು ತೂಕ ಸ್ಥಿರಗೊಳಿಸುವುದಕ್ಕೆ ಅವಕಾಶ ಮಾಡಿಕೊಡಬೇಕಿದೆ.  ಆದರೆ, ಯಾವ ಮಹಿಳೆಗೆ ಬೇರಿಯಾಟ್ರಿಕ್ ಸರ್ಜರಿ ಬಳಿಕ, ಗರ್ಭ ದರಿಸಲು  ೧೮ ತಿಂಗಳು ಕಾಯೋದಕ್ಕೆ ಆಗುವುದಿಲ್ಲವೋ ಅಂಥವರಿಗೆ ಎಲ್ಎಬಿಜಿ ಮೊದಲಾದ ಸರ್ಜರಿಗಳಿವೆ.


ಔಷಧ ಗಳಿಂದ ಏನಾದರೂ ಉಪಯೋಗ ಇದೆಯಾ?

ತೂಕ ಕಡಿಮೆ ಮಾಡುವಂಥ ಕೆಲವೊಂದು ಔಷಧ ಗಳಿವೆ. ಆದರೆ, ಅವುಗಳ ಬಳಕೆ ಕೂಡಾ  ಅಡ್ಡ ಪರಿಣಾಮಗಳಿಂದ ಹೊರತಾಗಿಲ್ಲ.

     
 
ನೋಂದಣಿಗೆ ಕರೆ ಮಾಡಿ: +91-99000-14824, +91-99000-14825
 
  ವೈದ್ಯರನ್ನು ಭೇಟಿ ಮಾಡಿ