ರೋಗಿಗಳ ಅಭಿಪ್ರಾಯಗಳು
 

ತಜ್ಷರ ಮಾತು
 

ಅಪಸ್ಮಾರ (ಮೂರ್ಛೆ) ಪ್ರಥಮ ಚಿಕಿತ್ಸೆ
 

ಕೇಸ್ ಹಿಸ್ಟರಿ
 

ಈ ವಿಡಿಯೋವನ್ನು ವೀಕ್ಷಿಸಿ, ಅಪಸ್ಮಾರದ ಬಗ್ಗೆ ಹೆಚ್ಚು ತಿಳಿದುಕೊಳ್ಳಿ
 

ರೋಗದ ಲಕ್ಷಣಗಳು ಮತ್ತು ಚಿಹ್ನೆಗಳು
 
ವೈದ್ಯರನ್ನು ಭೇಟಿ ಮಾಡಿ
 
ಸೊನೋ ವ್ಯಾಂಡ್
 
 

ರೋಗದ ಗುಣ ಲಕ್ಷಣಗಳು (ಸಾಮಾನ್ಯವಾಗಿ ಪುನರಾವರ್ತಿತ ಮತ್ತು ಅಲ್ಪಾವಧಿ)

 • ಕಣ್ಣು ಕತ್ತಲು ಬರುವುದು
 • ಗೊಂದಲಕ್ಕೆ ಒಳಗಾಗುವುದು
 • ಅವಯವಗಳು ಸೆಟೆದುಕೊಂಡು ನಡುಕ ಉಂಟಾಗುವುದು (ಕಾಲು ಮತ್ತು ಕೈಗಳ ಅನೈಚ್ಛಿಕ ಚಲನೆ ) 
 • ಅಲ್ಪ ಕಾಲದ ಅರೆಪ್ರಜ್ಞಾವಸ್ಥೆ
 • ಸ್ನಾಯುಗಳು ಸೆಟೆದುಕೊಳ್ಳುವುದು
 • ಶರೀರ ಸೆಟೆದುಕೊಳ್ಳುವುದು
 • ಭಾವನಾತ್ಮಕ ನಿಯಂತ್ರಣ ಕಳೆದುಕೊಳ್ಳುವುದು, ತಪ್ಪು ಗ್ರಹಿಕೆ, ವಿಚಿತ್ರ ಧ್ವನಿ ಹೊರಡಿಸುವುದು 
 • ನಿಯಂತ್ರಿಸಲಾಗದ ಸುಸ್ತು, ಸಾಮರ್ಥ್ಯ ಕೆಡಿಸುವಂತೆ ಮೂರ್ಛೆ ಹೋಗುವಿಕೆ

 

ಮೂರ್ಛೆ ರೋಗ ಅಂದರೇನು ?

ಮೂರ್ಛೆ ರೋಗದ ಆಘಾತಗಳು ಮೆದುಳಿನ ಗಾಯ ಅಥವಾ ಕೌಟುಂಬಿಕ ಹಿನ್ನೆಲೆಗೆ ಸಂಬಂಧ ಪಟ್ಟಿರಬಹುದು. ಆದರೆ, ಬಹುತೇಕ ಸಂದರ್ಭಗಳಲ್ಲಿ ಆಘಾತದ ಕಾರಣ ತಿಳಿದಿರೋದಿಲ್ಲ. 'ಮೂರ್ಛೆ ರೋಗ (ಎಪಿಲೆಪ್ಸಿ)' ಎಂಬ ಶಬ್ಧದ ಮೂಲಕ ಯಾವುದೇ ವ್ಯಕ್ತಿಯ ಆಘಾತದ ಕಾರಣ, ಅದರ ವಿಧ ಅಥವಾ ಆಘಾತಗಳು ಎಷ್ಟು ತೀವ್ರವಾಗಿದೆ ಎಂಬುದನ್ನು ತಿಳಿಸೋದಿಲ್ಲ.

'ಮೂರ್ಛೆ ರೋಗ (ಎಪಿಲೆಪ್ಸಿ)'  ಎನ್ನುವುದು ನರಮಂಡಲದ ಮೇಲೆ ಪರಿಣಾಮ ಬೀರುವಂಥ ನರವೈಜ್ಞಾನಿಕ ಸಮಸ್ಯೆ.  ಇದನ್ನು ಫಿಟ್ಸ್ ಎಂದೂ ಹೇಳುತ್ತಾರೆ. ಸಾಮಾನ್ಯವಾಗಿ ಇದನ್ನು  ಯಾವಾಗ ಡಯಗ್ನೋಸ್ ಮಾಡಬೇಕು ಅಂದರೆ, ವ್ಯಕ್ತಿಗೆ ಕನಿಷ್ಠ ಎರಡು ಬಾರಿ ಆಘಾತ ಆಗಿದ್ದು, ಅಂಥಹ ಆಘಾತ ಯಾವುದೇ ವೈದ್ಯಕೀಯ ಚಿಕಿತ್ಸೆಯಿಂದ ಅಂದರೆ ಮದ್ಯ ಸೇವನೆ ಮುಕ್ತಗೊಳಿಸುವುದು ಅಥವಾ ರಕ್ತದಲ್ಲಿ ಸಕ್ಕರೆ ಅಂಶ ತುಂಬಾ ಕಡಿಮೆ ಇದ್ದ ವೇಳೆ ಆಗಿರಬಾರದು. .

ಇಂಟರ್ ನ್ಯಾಶನಲ್ ಲೀಗ್  ಅಗಿನಿಸ್ಟ್  ಎಪಿಲೆಪ್ಸಿ  ಪ್ರಕಾರ, ಕೆಲವೊಮ್ಮೆ  ವ್ಯಕ್ತಿಗೆ ಒಂದು ಆಘಾತ ಉಂಟಾದ ಕೂಡಲೇ ಮೂರ್ಛೆ ರೋಗದ ಡಯಾಗ್ನೋಸ್ ಮಾಡಬಹುದು.  ಯಾಕೆಂದರೆ ಒಂದು ಆಘಾತ ಆದ ಕೂಡಲೇ ವ್ಯಕ್ತಿಯ ಆರೋಗ್ಯ ಪರಿಸ್ಥಿತಿಯಲ್ಲಿ ವ್ಯತ್ಯಾಸ ಆಗಿ ಮತ್ತೊಮ್ಮೆ ಆಘಾತ ಆಗುವ ರಿಸ್ಕ್ ಇದ್ದರೆ ಇಂಥಹ ಡಯಾಗ್ನೋಸ್ ಅಗತ್ಯ.

ಆಘಾತ ಅಂದರೇನು ?

ಆಘಾತ ಅಂದರೆ, ಮೆದುಳಿನಲ್ಲಿ ದಿಢೀರ್ ಆಗಿ ಉಂಟಾಗುವ ವಿದ್ಯುತ್ ಸಂಚಲನ ಉಂಟಾಗಿ, ಇದರಿಂದ ವ್ಯಕ್ತಿಯ ನಡವಳಿಕೆಯಲ್ಲಿ ವ್ಯತ್ಯಾಸ ಕಾಣಬಹುದು. ಇದು ಅಲ್ಪ ಸಮಯದ್ದಾಗಿದೆ. ಆಘಾತಗಳು ರೋಗದ ಪಟ್ಟಿಗೆ ಒಳಪಟ್ಟಿಲ್ಲ. ಬದಲಾಗಿ  ಮೆದುಳಿನ ಮೇಲೆ ಪರಿಣಾಮ ಬೀರಬಲ್ಲ ಹಲವು ಅಸ್ವಸ್ಥತೆಗಳ ಗುಣ ಲಕ್ಷಣ ಇದಾಗಿರಬಹುದು. ಕೆಲವು ಆಘಾತಗಳನ್ನು ಬೇಗನೆ ಗುರುತಿಸಬಹುದು, ಇನ್ನು ಕೆಲವನ್ನು ಗುರುತಿಸುವುದು ಕಷ್ಟ.

ಮೂರ್ಛೆ ರೋಗದ ಆಘಾತಗಳು ಒಂದೋ ಮೆದುಳಿಗೆ ಆದ ಗಾಯದ ಪರಿಣಾಮ ಇರಬಹುದು. ಇಲ್ಲವೇ, ಕೌಟುಂಬಿಕ ಹಿನ್ನೆಲೆ ಕೂಡಾ ಇರಬಹುದು.  ಆದರೆ, ಮೂರ್ಛೆ ರೋಗಕ್ಕೆ ಕಾರಣ ಮಾತ್ರ ಸಂಪೂರ್ಣವಾಗಿ ತಿಳಿಯೋದು ಕಷ್ಟ. 'ಮೂರ್ಛೆ ರೋಗ' ಅಥವಾ 'ಎಪಿಲೆಪ್ಸಿ' ಎಂಬ ಶಬ್ದ  ವ್ಯಕ್ತಿಯ ಆಘಾತಗಳ ಗಂಭೀರತೆ ಅಥವಾ ಕಾರಣಗಳ ಬಗ್ಗೆ ಯಾವುದೇ ರೀತಿಯಲ್ಲಿ ಕೂಡಾ  ಸಂಕೇತಿಸುವುದಿಲ್ಲ.

ನಾನು ಒಮ್ಮೆ ಮೂರ್ಛೆ ಹೋದರೆ, ಅದರ ಅರ್ಥ ನನಗೆ ಮೂರ್ಛೆರೋಗ ಬರತ್ತೆ ಎಂದೇ ?

ಯಾವುದೇ ಸ್ಪಷ್ಟ ಕಾರಣ ಇಲ್ಲದೆ ಒಂದು ಬಾರಿ ಆಘಾತಕ್ಕೆ ಒಳಗಾದ ಅರ್ಧದಷ್ಟು ಜನರಲ್ಲಿ ಸಾಮಾನ್ಯವಾಗಿ ಆರು ತಿಂಗಳ ಒಳಗೆ ಮತ್ತೊಮ್ಮೆ ಆಘಾತ ಕಂಡು ಬರತ್ತೆ. ನಿಮ್ಮಲ್ಲಿ ಎರಡನೇ ಆಘಾತ ಯಾವಾಗ ಕಂಡು ಬರುತ್ತದೆ ಅಂದರೆ, ನಿಮ್ಮ ಮೆದುಳಿಗೆ ಗೊತ್ತಾಗುವ ರೀತಿಯಲ್ಲೇ ಗಾಯ ಆಗಿರಬೇಕು ಅಥವಾ ಮೆದುಳಿನಲ್ಲಿ ಅಸಮತೋಲನ ಇರಬೇಕು. ನಿಮಗೆ ಎರಡು ಆಘಾತ ಆಗಿದ್ದಲ್ಲಿ,  ಇನ್ನಷ್ಟು ಆಘಾತ ಉಂಟಾಗುವ ಸಾಧ್ಯತೆ  ಶೇ. ೮೦ ರಷ್ಟು ಇದೆ.

ಮೆದುಳಿನ  ಮೇಲಿನ ಗಾಯ ಅಥವಾ ಸೋಂಕಿನಿಂದ ನಿಮ್ಮ ಮೊದಲ ಆಘಾತ ಉಂಟಾಗಿದ್ದರೆ,  ಆಘಾತಕ್ಕಿಂತಲೂ ಹೆಚ್ಚಾಗಿ ನಿಮಗೆ ಮೂರ್ಛೆ ರೋಗ ಬರುವ ಸಾಧ್ಯತೆ ಹೆಚ್ಚಾಗಿದೆ. ಹೆಚ್ಚು ಆಘಾತಗಳು ಉಂಟಾಗಿ, ತಪಾಸಣೆಗೆ ವೈದ್ಯರ ಬಳಿ ಹೋದಾಗ  ಅಲ್ಲಿ, ನಿಮ್ಮ ನರಮಂಡಲದ ವ್ಯವಸ್ಥೆಯಲ್ಲಿ ಅಸಹಜತೆಯನ್ನು ವೈದ್ಯರು ಗುರುತಿಸಬಹುದು.  ಇನ್ನೊಂದು ವಿಚಾರ ಅಂದರೆ, ನಿಮಗೆ ಹೆಚ್ಚಿನ ಆಘಾತ ಉಂಟಾಗಬಹುದು ಅನ್ನೋದನ್ನು ವೈದ್ಯರು ಗುರುತಿಸಲು ಇಇಜಿ, ಎಲೆಕ್ಟ್ರೋಎನ್ಸೆಫಾಲೋಗ್ರಾಮ್( e-LEK-tro-en-SEF-uh-LOG-ram) ನಡೆಸುತ್ತಾರೆ. ಈ ತಪಾಸಣೆ ವೇಳೆ, ವಯರ್ ಗಳನ್ನು  ನೆತ್ತಿಯ ಮೇಲೆ ಅಂಟಿಸಲಾಗುತ್ತದೆ. ಇದು ಮೆದುಳಿನ ಅಲೆಗಳನ್ನು ಗುರುತಿಸಲು ಸಹಕಾರಿ. ಎಪಿಲೆಪ್ಸಿ ಮೂಲ ಮತ್ತು ಮಾದರಿ ಗುರುತಿಸಲು ಇಇಜಿ ನಡೆಸಲಾಗುತ್ತದೆ. ನಿಮ್ಮ ಮೆದುಳಿನ  ಅಲೆಗಳ ಮೂಲಕ ಅಂಥಹ ಗುಣಲಕ್ಷಣಗಳು ಕಂಡು ಬಂದರೆ, ಮೂರ್ಛೆ ರೋಗ ಉಂಟಾಗುವ ಸಾಧ್ಯತೆ ದುಪ್ಪಟ್ಟಾಗಿರುತ್ತದೆ.

ಆಘಾತ ಎಂಬುದನ್ನು ವ್ಯಾಖ್ಯಾನಿಸುವುದಾದರೆ, ಮೆದುಳಿನ ಕಾರ್ಯದಲ್ಲಿ ಅಂದರೆ ಮೆದುಳಿನ ಹೊರಭಾಗದಲ್ಲಿ ಇರುವ ಕಾರ್ಟೆಕ್ಸ್ ನಲ್ಲಿ ಉಂಟಾಗುವ  ವಿದ್ಯುತ್ ಸಂಚಲನದಿಂದಾಗಿ, ನಡವಳಿಕೆಯಲ್ಲಿ  ಉಂಟಾಗುವ ತಾತ್ಕಾಲಿಕ  ಬದಲಾವಣೆ.  ಕೆಳಗೆ ಹೇಳಿರುವ ಗುಣಲಕ್ಷಣ ಇರುವ ವ್ಯಕ್ತಿಗಳನ್ನು ನಿಮ್ಮ ಸುತ್ತ ಮುತ್ತ ನೀವು ಕಾಣಬಹುದು. ಮೂರ್ಛೆ ರೋಗ ಇರುವ ವ್ಯಕ್ತಿಗಳಲ್ಲಿ ಆಘಾತ ಉಂಟಾದಾಗ, ಒಬ್ಬೊಬ್ಬರು ಒಂದೊಂದು ರೀತಿಯ  ನಡವಳಿಕೆ ತೋರಬಹುದು.

ಆಘಾತಗಳಿಗೆ ಆರಂಭ, ಮಧ್ಯಂತರ ಮತ್ತು ಕೊನೆ ಇದೆ.

ಯಾವಾಗ ವ್ಯಕ್ತಿಗೆ ಆಘಾತದ ಆರಂಭದ ಬಗ್ಗೆ ತಿಳಿವಳಿಕೆ ಇರುತ್ತದೋ, ಅದನ್ನು ಎಚ್ಚರಿಕೆ ಎಂದು ತಿಳಿಯಬೇಕು. ಇನ್ನೊಂದೆಡೆ, ವ್ಯಕ್ತಿಗೆ ಆಘಾತದ ಆರಂಭದ ಬಗ್ಗೆ ತಿಳಿವಳಿಕೆ ಇಲ್ಲದೆ ಇದ್ದಲ್ಲಿ, ಎಚ್ಚರಿಕೆ ಪ್ರಶ್ನೆ ಇರಲಾರದು. ಕೆಲವೊಮ್ಮೆ, ಇಂಥಹ ಎಚ್ಚರಿಕೆಯ ಆರಂಭ ಇಲ್ಲದೆ ಹೋಗಬಹುದು. ಆದರೆ, ಇತರೆ ಗುಣಲಕ್ಷಣಗಳು ಕಾಣಿಸಿಕೊಳ್ಳಬಹುದು. ಅವುಗಳನ್ನು ವೈದ್ಯರು ಭಾಗಶಃ ಆಘಾತ ಎಂದು ಪರಿಗಣಿಸಬಹುದು. 

ಆಘಾತದ ಮಧ್ಯಭಾಗದಲ್ಲಿ ನಡವಳಿಕೆ ವಿವಿಧ ರೂಪ ಪಡೆಯಬಹುದು. ಯಾವ ವ್ಯಕ್ತಿಗಳಿಗೆ ಆಘಾತದ ಮುನ್ನೆಚ್ಚರಿಕೆ ಆರಂಭದಲ್ಲಿ ಕಾಣಿಸಿ ಕೊಂಡಿರುತ್ತದೋ, ಅಂದರೆ ಸ್ನಾಯು ಸೆಳೆತದಿಂದ ಉಂಟಾಗುವ ನಡುಕ ಭಾಗಶಃ ಆಘಾತದಲ್ಲಿ ಕೊನೆಗೊಳ್ಳಬಹುದು.

ಆಘಾತದ ಕೊನೆ ಅಂದರೆ, ಆಘಾತದಿಂದ ಮುಕ್ತಿ ಪಡೆದು ಮತ್ತೆ ಸಾಮಾನ್ಯ ಸ್ಥಿತಿಗೆ ಮರಳುವ ಸಮಯ. ಈ ಅವಧಿಯನ್ನು ಪೋಸ್ಟ್ ಇಕ್ಟಲ್ ಪೀರಿಯಡ್ (post-ictal period ) ಎಂದು ಕರೆಯುತ್ತಾರೆ. ಈ ಅವಧಿ ಮೆದುಳಿನ ಚೇತರಿಕೆ ಸಮಯ ಎಂದು ಪರಿಗಣಿತವಾಗಿದೆ. ಮೆದುಳಿನ ಯಾವ ಭಾಗಕ್ಕೆ ಆಘಾತ ಉಂಟಾಗಿದೆ ಎಂಬುದಕ್ಕೆ ತಕ್ಕಂತೆ, ಇದು ಕೆಲವೊಂದು ಪರಿಸ್ಥಿತಿಯಲ್ಲಿ ಸೆಕಂಡ್ ಗಳಲ್ಲಿ, ಅಥವಾ ಮಿನಿಟ್ ಗಳಲ್ಲಿ, ಅಥವಾ ಗಂಟೆಗಳ ತನಕ ಕೂಡಾ ಉಳಿದುಕೊಳ್ಳಬಹುದು.

ವ್ಯಕ್ತಿಯಲ್ಲಿ ಭಾಗಶಃ ಆಘಾತ ಸಂಭವಿಸಿದರೆ, ಇಕ್ಟಲ್ ಪೀರಿಯಡ್ ನಲ್ಲಿ ಚೇತರಿಕೆ ಪ್ರಮಾಣದಲ್ಲಿ ಸುಧಾರಣೆ ಕಂಡು ಬರುವುದು ಹೇಗೆಂದರೆ, ಶಸ್ತ್ರ ಚಿಕಿತ್ಸೆ ಮುಗಿದ ಬಳಿಕ ಪ್ರಜ್ಞಾಹೀನ ಪರಿಸ್ಥಿತಿಯಿಂದ ಪ್ರಜ್ಞೆಗೆ ಬರುವಂತೆ ಕಂಡು ಬರುತ್ತದೆ.  ಪೋಸ್ಟ್ ಇಕ್ಟಲ್ ಪೀರಿಯಡ್ನಲ್ಲಿ ಇನ್ನಷ್ಟು ಗುಣಲಕ್ಷಣಗಳನ್ನು ನಾವು ಕಾಣಬಹುದು. ಅದನ್ನು ಕೆಳಗೆ ವಿವರಿಸಲಾಗಿದೆ.

ದಯವಿಟ್ಟು ಗಮನಿಸಿ: ಕೆಳಗೆ ಇರುವುದು ಭಾಗಶಃ ಪಟ್ಟಿ ಮಾತ್ರ, ಕೆಲವರಲ್ಲಿ ಕೆಳಗೆ ಪಟ್ಟಿಯಲ್ಲಿ ಇರದ ಇತರೆ ಲಕ್ಷಣಗಳು ಕಾಣಿಸಬಹುದು. ಈ ಪಟ್ಟಿಯನ್ನು ರೋಗಿಗಳು ವೈದ್ಯರು ಸಂವಹನಕ್ಕೆ ಸಹಾಯ ಮಾಡುವ ಉದ್ದೇಶದಿಂದ ನೀಡಲಾಗಿದೆ.

ಯಾರಿಗೆ ಎಪಿಲೆಪ್ಸಿ ಬರುತ್ತದೆ ?

ಎಪಿಲೆಪ್ಸಿ ಯಾವುದೇ ವಯಸ್ಸಿನಲ್ಲಿ ಯಾವುದೇ ವ್ಯಕ್ತಿಗೆ ಬರಬಹುದು. ಶೇ. 0.5%  ರಿಂದ  2% ವರೆಗಿನ ಜನರಿಗೆ ಅವರ ಜೀವಿತಾವಧಿಯಲ್ಲಿ ಎಪಿಲೆಪ್ಸಿ ಬರುವ ಸಾಧ್ಯತೆ ಇದೆ. ಎಪಿಲೆಪ್ಸಿಯ ಕೆಲವೊಂದು ಗುಣ ಲಕ್ಷಣ ಹೊಂದಿರುವ ವ್ಯಕ್ತಿಗಳಲ್ಲಿ ಎಪಿಲೆಪ್ಸಿ ಬರುವ ರಿಸ್ಕ್ ಹೆಚ್ಚಾಗಿರುತ್ತದೆ (ವಿವರಕ್ಕೆ "ಎಪಿಲೆಪ್ಸಿ ಗೆ ಕಾರಣ ಏನು ?'' ನೋಡಿ )

ಯಾವಾಗೆಲ್ಲಾ ಎಪಿಲೆಪ್ಸಿ ಬರುವ ಸಾಧ್ಯತೆ ಇದೆ ?

ಎಪಿಲೆಪ್ಸಿಯ ಹೊಸ ಪ್ರಕರಣಗಳು ಮಕ್ಕಳಲ್ಲಿ ಸರ್ವೇ ಸಾಮಾನ್ಯ. ವಿಶೇಷವಾಗಿ ಒಂದು ವರ್ಷದ ಒಳಗಿನ ಮಕ್ಕಳಲ್ಲಿ ಇದು ಕಂಡು ಬರುತ್ತದೆ. ೧೦ ವರ್ಷ ವಯಸ್ಸಿನ ಒಳಗಿನ ಮಕ್ಕಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಕ್ರಮೇಣ ಕಡಿಮೆ ಆಗುವುದಲ್ಲದೆ, ಬಳಿಕ ಸ್ಥಿರವಾಗಿರುತ್ತದೆ. ೫೫ ಅಥವಾ ೬೦ ವರ್ಷ ದಾಟಿದ ಮೇಲೆ ಸ್ಟ್ರೋಕ್, ಮೆದುಳಿನ ಗಡ್ಡೆ, ಅಲ್ಜ್ಹೀಮರ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತದೆ. ( ಇವೆಲ್ಲ ಅಸಹಜತೆಗಳಿಗೆ ಎಪಿಲೆಪ್ಸಿಯೇ ಕಾರಣ)

ಎಪಿಲೆಪ್ಸಿ ಕುರಿತ ನಿಜಾಂಶಗಳು

 • ವಿಶ್ವದ ಜನಸಂಖ್ಯೆಯ ಶೇ. ೫ ರಷ್ಟು ಜನರು ತಮ್ಮ ಜೀವಿತಾವಧಿಯಲ್ಲಿ ಎಂದೋ ಒಮ್ಮೆ ಎಪಿಲೆಪ್ಸಿ ಗುಣಲಕ್ಷಣದ ಆಘಾತ ಅನುಭವಿಸಿರುತ್ತಾರೆ.
 • ಅಂದರೆ ವಿಶ್ವದಲ್ಲಿ ಅಂದಾಜು ೬೦ ಮಿಲಿಯ  ಜನರು ಯಾವಾಗಲೋ ಒಮ್ಮೆ ಅಪಸ್ಮಾರಕ್ಕೆ ತುತ್ತಾಗಿರುತ್ತಾರೆ.
 • ವಯಸ್ಕರಿಗಿಂತ ಮಕ್ಕಳು ಮತ್ತು ಹದಿಹರೆಯದವರಿಗೆ  ಅಜ್ಞಾತ ಅಥವಾ ಆನುವಂಶಿಕ ಮೂಲದ ಅಪಸ್ಮಾರ ಬರುವ ಸಾಧ್ಯತೆ ಹೆಚ್ಚು.
 • ಎಪಿಲೆಪ್ಸಿ ಯಾವುದೇ ವಯಸ್ಸಿನಲ್ಲೂ ಬರಬಹುದು
 • ಇತ್ತೀಚೆಗಿನ ಸಂಶೋಧನೆ ಪ್ರಕಾರ ಮಕ್ಕಳಲ್ಲಿ, ವಯಸ್ಕರಲ್ಲಿ ಕಂಡುಬರುವ ಶೇ. ೭೦ ರಷ್ಟು  ಹೊಸ ಅಪಸ್ಮಾರದ ಪ್ರಕರಣಗಳನ್ನು ಔಷಧಗಳಿಂದ ಗುಣಪಡಿಸಬಹುದು. ಆದಾಗ್ಯೂ, ಈ ರೀತಿ ಔಷಧಗಳ ಮೂಲಕ ಉಪಶಮನ ಕಂಡುಕೊಂಡರೂ, ಅದರ ಅಡ್ಡ ಪರಿಣಾಮ ಬಹಳ ಎಂಬುದು ಅನೇಕರಿಗೆ ಅನುಭವವಾಗಿದೆ. 
 • ಶೇ.೩೦ ರಷ್ಟು ವ್ಯಕ್ತಿಗಳಲ್ಲಿ, ಅಪಸ್ಮಾರ ಔಷಧಗಳ ಮೂಲಕ ಗುಣಪಡಿಸಲು ಸಾದ್ಯವಿಲ್ಲ.
 
 
 
 
 
ನೋಂದಣಿಗೆ ಕರೆ ಮಾಡಿ: +91-99000-14820

ಮೂರ್ಛೆ ರೋಗ

ವಿಕ್ರಂ ಆಸ್ಪತ್ರೆಯಲ್ಲಿ

ವಾಸಿಯಾಗುತ್ತದೆ.

 

•ಔಷಧದಿಂದ  •ಶಸ್ತ್ರಚಿಕಿತ್ಸೆಯಿಂದ

ಮೂರ್ಛೆ ರೋಗ /ಎಪಿಲೆಪ್ಸಿ ಯಿಂದ ಅಥವಾ ಫಿಟ್ಸ್ ನಿಂದ ಬಳಲುತ್ತಿದ್ದರೆ ಕೂಡಲೇ ತಮ್ಮ ವಿಶ್ವಾಸಾರ್ಹ "ನರರೋಗ ಚಿಕಿತ್ಸಕ"ರನ್ನು ಭೇಟಿ ಮಾಡಿ..
+91-99000 14820
   
 ವೈದ್ಯರನ್ನು ಭೇಟಿ ಮಾಡಿ