|
ಮೆದುಳಿನ ಆರೋಗ್ಯ ತಪಾಸಣೆ ಮಾಡಿಸಬೇಕಾದ್ದು ಯಾವಾಗ ಅಂದ್ರೆ..
- ದಿಡೀರ್ ಆಗಿ ತಲೆನೋವು ಕಾಣಿಸಿಕೊಂಡರೆ, ಅಂದರೆ ತಲೆ ಸಿಡಿದು ಚೂರು ಆಗುವಂಥ ತಲೆನೋವು ಕಾಣಿಸಿಕೊಂಡಾಗ...
- ಕಣ್ಣು ಮಂಜು ಆಗುವುದರ ಜೊತೆಗೆ ವಾಂತಿ ಮಾಡಿಕೊಳ್ಳುವುದು.. ಆಗ ತಲೆನೋವು ಹೆಚ್ಚಾಗುತ್ತಾ ಸಹಿಸಲು ಆಗದೆ ಇರುವ ಪರಿಸ್ಥಿತಿ ಉಂಟಾದಾಗ..
- ಮೆದುಳಿನಲ್ಲಿ ಯಾವುದೇ ರೀತಿಯ ವಿದ್ಯುತ್ ಸಂಚಾರದ ಅನುಭವ ಉಂಟಾದಾಗ/ ಫಿಟ್ಸ್ ಅಥವಾ ಮೂರ್ಛೆ ರೋಗ/ ಯಾವುದೇ ರೀತಿಯ ಅಪಸ್ಮಾರ ಕಂಡುಬಂದಾಗ..
- ಹಠಾತ್ ದೃಷ್ಟಿ ಕಳೆದುಕೊಂಡಾಗ ಅಥವಾ ಹಂತ ಹಂತವಾಗಿ ದೃಷ್ಟಿ ಕಳೆದುಕೊಂಡಾಗ..
- ಕಣ್ಣು ಅರೆಮುಚ್ಚಿದಂತೆ ಆಗಿದ್ದರೆ ಮತ್ತು ಎಲ್ಲವು ಎರಡೆರಡು ಆಗಿ ಕಾಣುತ್ತಿದ್ದರೆ..
- ಹಂತ ಹಂತವಾಗಿ ಮತ್ತು ಏಕಪಕ್ಷೀಯವಾಗಿ ಕೇಳುವಿಕೆ ಅಥವಾ ಶ್ರಾವಣ ಶಕ್ತಿ ಕಡಿಮೆ ಆದಲ್ಲಿ...
- ಆಹಾರ ನುಂಗುವಾಗ ಕಷ್ಟ ಆಗುವುದು/ ಮಾತನಾಡುವಾಗ ಕಷ್ಟ ಆದಲ್ಲಿ..
- ಇತ್ತೀಚಿಗೆ ನೆನಪಿನ ಶಕ್ತಿ ಕಡಿಮೆ ಆದಲ್ಲಿ ಅಥವಾ ಮರೆವು ಹೆಚ್ಚಾದಲ್ಲಿ..
- ವ್ಯಕ್ತಿತ್ವ /ನಡತೆಯಲ್ಲಿ ಇತ್ತೀಚಿಗೆ ಏನಾದ್ರು ರೀತಿಯ ಬದಲಾವಣೆ ಇದ್ದಲ್ಲಿ..
- ಬೆನ್ನು ನೋವು ಅಂದರೆ, ಬೆನ್ನಿನಿಂದ ಕಾಲಿಗೆ ವ್ಯಾಪಿಸುವಂಥ ನೋವು...
- ಕುತ್ತಿಗೆ ನೋವು ಅಂದರೆ, ಕುತ್ತಿಗೆಯಿಂದ ಕೈಗಳ ತನಕ ವ್ಯಾಪಿಸುವಂಥ ನೋವು..
- ಮೂಗಿನಲ್ಲಿ ತೊಂದರೆ ಕಾಣಿಸಿಕೊಳ್ಳುವುದು, ಸೋರುವಿಕೆ ಇತ್ಯಾದಿ..
- ಅವಯವಗಳಲ್ಲಿ ನಿಶ್ಯಕ್ತಿ ಕಾಣಿಸಿಕೊಂಡು, ಕೆಲವೇ ಗಂಟೆಗಳಲ್ಲಿ ಸುಧಾರಿಸಿಕೊಳ್ಳುವುದು..
- ಕೈ, ಕಾಲು ಸೇರಿದಂತೆ ಎಲ್ಲ ನಾಲ್ಕು ಅವಯವಗಳಲ್ಲಿ ವೀಕ್ನೆಸ್, ಜೋಮು ಹಿದಂತೆ ಆಗುವುದು, ಶಕ್ತಿ ಕುಂದಿದಂತೆ ಆಗುವುದು..
- ನಡೆದಾಡಲು ಕಷ್ಟ ಆಗುವುದು, ಕಾಲು ಆಡಿಸಲು ಕಷ್ಟ ಆಗುವುದು ಇತ್ಯಾದಿ..
- ಇತ್ತೀಚಿಗೆ ಮೂತ್ರ ಬರುವುದನ್ನು ನಿಯಂತ್ರಿಸಲು ಆಗದೆ ಇರುವ ತೊಂದರೆ ಆಗುತ್ತಿದ್ದಲ್ಲಿ..
ಮೇಲೆ ಹೇಳಿರುವ ಯಾವುದಾದರು ರೀತಿಯ ಅನುಭವ ತಮಗೆ ಆಗುತ್ತಿದ್ದಲ್ಲಿ, ತಕ್ಷಣವೇ ತಮ್ಮ ವಿಶ್ವಾಸಾರ್ಹ " ನರರೋಗ ಚಿಕಿತ್ಸಕರು / ನರರರೋಗ ತಜ್ಞ"ರನ್ನು ಭೇಟಿ ಮಾಡಿ..
+91-99000 14820
|