ಮಕ್ಕಳ ಹೃದಯದ ತಪಾಸಣೆ ಯಾವಾಗ ಮಾಡಬೇಕು ಅಂದರೆ..
  • ಪದೇಪದೇ ಕೆಮ್ಮು, ಶೀತ ಮತ್ತು ನ್ಯುಮೋನಿಯಾ ಕಂಡು ಬಂದಾಗ..
  • ಇತರೆ ಸಮಾನ ವಯಸಿನ ಮಕ್ಕಳಿಗೆ ಹೋಲಿಸಿದರೆ ತುಂಬಾ ಕಡಿಮೆ ತೂಕ ಹೊಂದಿದ್ದರೆ.. 
  • ನೀಲಿ ಬಣ್ಣಕ್ಕೆ ತಿರುಗಿದ ತುಟಿ ಮತ್ತು ಉಗುರುಗಳು..
  • ವೇಗವಾಗಿ ಉಸಿರಾಡುವುದು ಅಥವಾ ಸಶಬ್ದವಾಗಿ ಉಸಿರಾಡುವುದು, ಉಸಿರಾಟದ ವೇಳೆ ಎದೆಯಲ್ಲಿ ಏರಿಳಿತ ಕಂಡು ಬರುವುದು..
  • ಮಗುವಿಗೆ ಹಾಲು ಉಣಿಸೋದಕ್ಕೆ ಕಷ್ಟ ಆಗುವುದು ಅಂದರೆ, ಒಂದೇ ಸಲ ಹಾಲುಣಿಸೋದಕ್ಕೆ ಆಗದೆ ಇರುವುದು. (ಮಗು ಮೊಲೆ ಹಾಲು ಕುಡಿಯಬೇಕಾದರೆ, ಉಸಿರಾಟದ ತೊಂದರೆಯಿಂದ ಮಗು ಬಿಟ್ಟು ಬಿಟ್ಟು ಹಾಲು ಕುಡಿಯುವುದು.)
  • ಮಗುವಿನ ಚಲನೆಯಲ್ಲಿ ವಿಳಂಬ ಅಂದರೆ, ಕುಳಿತುಕೊಳ್ಳುವುದು, ನಿಂತುಕೊಳ್ಳುವುದು ಮತ್ತು ನಡೆದಾಡಲು ಆರಂಭಿಸುವಾಗ ತಡವಾಗುತ್ತದೆ..
  • ಅಗತ್ಯಕ್ಕಿಂತ ಹೆಚ್ಚಾಗಿ ಬೆವರುವುದು ಮತ್ತು ಬಹುಬೇಗನೆ ಸುಸ್ತಾಗುವುದು..
  • ಕೀಲು ನೋವು ಮತ್ತು ಊತದ ಜೊತೆಗೆ ಪದೇ ಪದೇ ಜ್ವರ ಕಾಣಿಸಿಕೊಳ್ಳುವುದು.. 
  • ಕೆಂಪು ಕಣ್ಣು (ಕವಸಕಿ ರೋಗ )
  • ವಿವರಿಸಲು ಆಗದೆ ಇರುವಂಥ ಪ್ರಜ್ಞಾಹೀನತೆ, ಎದೆನೋವು, ಎದೆ ಬಡಿತ ಇತ್ಯಾದಿ..
ಮೇಲೆ ಹೇಳಿರುವ ಯಾವುದಾದರು ರೀತಿಯ ಅನುಭವ ತಮ್ಮ ಮಗುವಿಗೆ ಆಗುತ್ತಿದ್ದಲ್ಲಿ, ತಕ್ಷಣವೇ  ತಮ್ಮ ವಿಶ್ವಾಸಾರ್ಹ ಮಕ್ಕಳ ಹೃದ್ರೋಗ ತಜ್ಞರನ್ನು ಭೇಟಿ ಮಾಡಿ..
+91-9686114161/62/63/64
   
ವೈದ್ಯರನ್ನು ಭೇಟಿ ಮಾಡಿ